ಫ್ರಾನ್ಸಿನ ಶಸ್ತ್ರಚಿಕಿತ್ಸಾತಜ್ಞ ಮತ್ತು ಜೀವವಿಜ್ಞಾನಿಯಾಗಿದ್ದ ಅಲೆಕ್ಸಿಸ್ ಕರೆಲ್‌ರವರು ೧೮೭೩ಯ ಜೂನ್ ೨೮ರಂದು ಫ್ರಾನ್ಸಿನ ರ‍್ಹೋನ್‌ನಲ್ಲಿ ಜನಿಸಿದರು. ಕರೆಲ್‌ರವರು ೧೯೦೫ರಲ್ಲಿ ಅಮೇರಿಕಕ್ಕೆ ಹೋದರು ಮತ್ತು ೧೯೩೯ರವರೆವಿಗೂ ಅಲ್ಲೇ ನೆಲೆಸಿದ್ದರು. ಆ ಅವಧಿಯಲ್ಲಿ ಅವರು ನ್ಯೂಯಾರ್ಕಿನಲ್ಲಿರುವ ರಾಕ್‌ಫೆಲ್ಲರ್ ವೈದ್ಯಕೀಯ ಸಂಶೋಧನಾ ಸಂಸ್ಥೆಯಲ್ಲಿ (ಈಗ ಅದು ರಾಕ್‌ಫೆಲ್ಲರ್ ವಿಶ್ವವಿದ್ಯಾಲಯವಾಗಿದೆ) ಕೆಲಸ ಮಾಡಿದರು. ಆ ಅವಧಿಯಲ್ಲಿ ಅವರು ರಕ್ತನಾಳಗಳನ್ನು ಹೊಲೆಯುವ ವಿಧಾನವನ್ನು (೧೯೦೨ರಲ್ಲಿ) ಕಂಡುಹಿಡಿದರು. ಅದಕ್ಕೆ ಈಗ ’ನಾಳೀಯ ಶಸ್ತ್ರಚಿಕಿತ್ಸೆ’ ( ) ಎಂಬುದಾಗಿ ಕರೆಯಲಾಗಿದೆ. ಆ ವಿಧಾನದ ಸಂಶೋಧನೆಗೆ ಅವರಿಗೆ ೧೯೧೨ರ ವೈದ್ಯಕೀಯ ಕ್ಷೇತ್ರಕ್ಕೆ ಮೀಸಲಾದ ನೊಬೆಲ್ ಪ್ರಶಸ್ತಿಯನ್ನು ನೀಡಲಾಯಿತು. ೧೯೩೦ರಲ್ಲಿ ಕರೆಲ್‌ರವರು ಅಮೇರಿಕದ ವಾಯುಯಾನತಜ್ಞರಾಗಿದ್ದ ಚಾರ್ಲ್ಸ್ ಲಿಂಡ್‌ಬರ್ಗ್‌ರವರ ಜೊತೆ ಸೇರಿ ದೇಹದ ಅವಯವಗಳಿಗೆ ಪ್ರಮುಖವಾದ ದ್ರವಗಳನ್ನು ಹರಿಸಲು ಅನುಕೂಲವಾದ ’ಯಾಂತ್ರಿಕ ಹೃದಯ’ವನ್ನು ( ) ಸಂಶೋಧಿಸಿದರು. ಅನೇಕ ಪ್ರಾಣಿಗಳ ಊತಕಗಳನ್ನು ಮತ್ತು ಅವಯವಗಳನ್ನು ಅನೇಕ ವರುಷಗಳ ಕಾಲ ಸುಸ್ಥಿತಿಯಲ್ಲಿಡಲು ಇಂತಹ ಸಂಶೋಧನೆಯಿಂದ ಸಾಧ್ಯವಾಯಿತು. ೧೯೩೯ರಲ್ಲಿ ಕರೆಲ್‌ರವರು ಫ್ರಾನ್ಸಿಗೆ ವಾಪಸ್ಸಾದರು. ಕರೆಲ್‌ರವರು ೧೯೪೪ರ ನವೆಂಬರ್ ೫ರಂದು ನಿಧನರಾದರು. == ಉಲ್ಲೇಖಗಳು ==